ಅಭಿನವಶಂಕರ

ಆದಿಶಂಕರಾಚಾರ್ಯರ ಅನಂತರ ಕಾಮಕೋಟಿ ಪೀಠದ ಚರಿತ್ರೆಗನುಸಾರವಾಗಿ ನಾಲ್ವರು ಶಂಕರನಾಮಧೇಯವುಳ್ಳ ಪೀಠಾಧಿಪತಿಗಳು ಇದ್ದರೆಂದು ತಿಳಿಯಬರುತ್ತದೆ. ಇವರಲ್ಲಿ ಕೃಪಾಶಂಕರರು ಒಂಬತ್ತನೆಯವರು. ಉಜ್ವಲಶಂಕರರು ಹದಿನೈದನೆಯವರು, ಮೂಕಶಂಕರರು ಇಪ್ಪತ್ತೈದನೆಯವರು. ಅಭಿನವಶಂಕರರು ಮೂವತ್ತೆಂಟನೆಯವರು. ಇವರು ಚಿದಂಬರದ ವಿಶ್ವಜಿತ್ ಎಂಬುವರ ಪುತ್ತರು. ಆದಿಶಂಕರರಂತೆ ಭಾರತದಾದ್ಯಂತ ಸುತ್ತಿ ಅದ್ವೈತವನ್ನು ಪುನರುಜ್ಜೀವನಗೊಳಿಸಿದ್ದರಿಂದ ಇವರಿಗೆ ಅಭಿನವಶಂಕರರೆಂಬ ಹೆಸರು ಬಂತು. ಪ್ರತಿವಾದಿಭಯಂಕರರಾಗಿದ್ದರಿಂದ ಅಭಿನವ ಎಂಬ ಉಪನಾಮಧೇಯದೊಂದಿಗೆ ಧೀರಶಂಕರ ಎಂಬ ಉಪನಾಮಧೇಯವೂ ಪ್ರಚಾರದಲ್ಲಿತ್ತು. ಇವರ ಕೀರ್ತಿ ಚೀನ, ತುರ್ಕಿ, ಮತ್ತು ಪಾರಸಿ ವೇಶಗಳವರೆಗೆ ಹಬ್ಬಿತ್ತು ಎಂದು ವಾಕ್ಪತಿಭಟ್ಟ ಬರೆದ ಶಂಕರೇಂದು ವಿಲಾಸವೆಂಬ ಇವರ ಜೀವನಚರಿತ್ತೆ ತಿಳಿಸುತ್ತದೆ. 52 ವರ್ಷಗಳ ಕಾಲ ಕಾಮಕೋಟಿ ಪೀಠಾಧಿಪತಿಗಳಾಗಿದ್ದು ಸಿದ್ಧಾರ್ಥಿಸಂವತ್ಸರದ (ಕಲಿವರ್ಷ 3941) ಆಷಾಢ ಶುಕ್ಲಪ್ರತಿಷತ್ ನಿರ್ವಾಣಹೊಂದಿದರು. 			
  
(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ